ಕಾರ್ಯಕಾರಣ ಶಾಸ್ತ್ರ

 ಗ್ರೀಕಿನಲ್ಲಿ ಈ ಶಾಸ್ತ್ರವನ್ನು ಈಟಿಯಾಲೊಜಿ ಎಂದು ಕರೆಯಲಾಗಿದೆ. ಈಟಿಯಾ ಎಂದರೆ ಕಾರಣ; ಲಾಗಾಸ್ ಎಂದರೆ ಶಾಸ್ತ್ರ. ಈಟಿಯಾಲಜಿ ಎಂದರೆ ಸಾಮಾನ್ಯವಾಗಿ ಕಾರಣವೆನ್ನುವುದರ ವಿವೇಚನೆಗೆ ಸಂಬಂಧ ಪಟ್ಟ ಶಾಸ್ತ್ರ ಎಂದಾಗುತ್ತದೆ. 

 ಆದರೆ ತತ್ತ್ವಶಾಸ್ತ್ರದಲ್ಲಾಗಲೀ ವಿಜ್ಞಾನದಲ್ಲಾಗಲೀ ಕಾರ್ಯಕಾರಣಗಳ ವಿವೇಚನೆಯನ್ನು ಈಟಿಯಾಲೊಜಿ ಎಂದು ಕರೆಯದೆ ಕಾರ್ಯಕಾರಣ ವಿಧಾನ (ಕಾಸ್ಯಾಲಿಟಿ; ಕಾಸೇಷನ್) ಎಂದು ಕರೆಯುತ್ತಾರೆ. ಈಟಿಯಾಲಜಿ ಎನ್ನುವುದು ಮೇಲಿನ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿರದೆ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರ ಬಳಸಲ್ಪಟ್ಟು ರೋಗಗಳ ಹುಟ್ಟು, ಅದರ ವಿಶ್ಲೇಷಣೆ, ಅದರ ನಿವಾರಣೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆ ಶಾಸ್ತ್ರದ ರೀತ್ಯ ಇದನ್ನು ವ್ಯಾಧಿಕಾರಣವಿಜ್ಞಾನ, ರೋಗನಿದಾನ ಎನ್ನಬಹುದು.  

 

   (ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ